ಕರ್ನಾಟಕ ಬರಿ ನಾಡಲ್ಲ,
ನಮ್ಮ ಸಂಸ್ಕೃತಿಯ ಧಾತು
ಕನ್ನಡ ಕೇವಲ ನುಡಿಯಲ್ಲ,
ನಮ್ಮಂತರಂಗದಾ ಮಾತು||

– ಬಿ. ಆರ್. ಲಕ್ಷ್ಮಣ ರಾವ್


ಕನ್ನಡ ರಸಪ್ರಶ್ನೆ - ೩

1 / 5

ಮಬ್ಬು ಕವಿದರೇನು.....

 

ಮಬ್ಬು ಕವಿದರೇನು
ನಿನ್ನ ಹಬ್ಬಿದಿರುಳ ದಾರಿಗೆ
ನಡೆ ಮುಂದಕೆ ದೈರ್ಯದಿಂದ
ಅರುಣೋದಯ ತೀರಕೆ ||ಪ||

 

ಹಳೆ ನೆನಪುಗಳುದುರಲಿ ಬಿಡು
ಬೀಸುವ ಚಳಿ ಗಾಳಿಗೆ
ತರಗೆಲೆಗಳ ಚಿತೆಯುರಿಯಲಿ
ಚೈತ್ರೋದಯ ಜ್ವಾಲೆಗೆ ||೧||

 

ಹೊಸ ಭರವಸೆ ಚಿಗುರುತಲಿವೆ
ಎಲೆ ಉದುರಿದ ಕೊಂಬೆಗೆ
ಅರಳಿ ನಗುವ ಹೂಗಳಲ್ಲಿ
ಪುಟಿಯುತಲಿವೆ ನಂಬಿಕೆ ||೨||

 

ಹಗಲಿರುಳಿನ ಕುದುರೆಗಳನು
ಹೂಡಿದ ರಥ ಸಾಗಿದೆ
ಯುಗ ಯುಗಗಳ ಹಾದಿಯಲಿ
ಋತು ಚಕ್ರಗಳುರುಳಿವೆ ||೩||

 

 

ಈ ಕವನವನ್ನು ರಚಿಸಿದವರು ಯಾರು?

2 / 5

೧೯೩೫ ರಲ್ಲಿ ಮೈಸೂರಿನಲ್ಲಿ ಪ್ರಾರಂಭಿಸಿದ ರೇಡಿಯೊ ಕೇಂದ್ರ ಇಡೀ ಭಾರತದ ಮೊದಲ ಖಾಸಗಿ ರೇಡಿಯೊ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸ್ಥಾಪಿಸಿದವರು ಯಾರು?

3 / 5

ಈ ಕೆಳಗಿನ ನುಡಿಗಟ್ಟಿನ ಅರ್ಥವೇನು?
'ಭೂಮಿ ತೂಕದ ಮನುಷ್ಯ '

4 / 5

ಇತ್ತೀಚಿಗೆ ನಡೆದ ಕಾಮನ್ ವೆಲ್ತ್ ಗೇಮ್ಸ್ ನ ಅತಿ ಪ್ರಮುಖ ಗಣ್ಯರಿಗೆ ಕರ್ನಾಟಕದಲ್ಲಿ ಪ್ರಸಿದ್ದವಾದ ಬಿದರಿ ಕಲೆ ಉಡುಗೊರೆಗಳನ್ನೂ ಕೊಡಲಾಗಿತ್ತು. ಬಿದರಿ ಕಲೆ ಮೊದಲು ಜನಿಸಿದ ಕರ್ನಾಟಕದ ಜಿಲ್ಲೆ ಯಾವುದು?

5 / 5

ಕನ್ನಡ ನಾಡಿನ ಬಗ್ಗೆ ವರ್ಣಿಸಿರುವ ಈ ಕೆಳಗಿನ ಪದ್ಯ ಇರುವ ಪ್ರಸಿದ್ಧ ಕೃತಿ ಯಾವುದು?

 

ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ-
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ-|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯ (ಉತ್ಪಲಮಾಲೆ)

 

ಗದ್ಯಭಾಗ : ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು.

ನಿಮ್ಮ ಒಟ್ಟು ಅಂಕಗಳು

0%